ಉದ್ದೇಶಗಳು

 

 ಧ್ಯೇಯೋದ್ದೇಶಗಳು:

 

 1. ಕೃಷಿ ತಾಂತ್ರಿಕತೆಗಳನ್ನು/ಮಾಹಿತಿಯನ್ನು ರೈತರಿಗೆ ವರ್ಗಾಯಿಸುವುದು.

 2. ಕೃಷಿ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ಗುಣಮಟ್ಟದ ಕೃಷಿ ಪರಿಕರಗಳ ಸರಬರಾಜನ್ನು ಖಚಿತಪಡಿಸುವುದು.

 3. ಮಣ್ಣಿನ ಸುಸ್ಥಿರ ಆರೋಗ್ಯ ನಿರ್ವಹಣೆ.

 4. ಮಳೆ ಆಶ್ರಿತ ಕೃಷಿಯ ರೈತರನ್ನು ಕೃಂದ್ರೀಕರಿಸಿ, ಮಳೆ ನೀರು ಸಂಗ್ರಹಣೆ ಮತ್ತು ಪನರ್ ಬಳಕೆಗೆ ಆದ್ಯತೆ  ನೀಡುವುದು.

 5. ಸಸ್ಯ ಸಂರಕ್ಷಣೆ ಮತ್ತು ನೈರ್ಮಲ್ಯತೆ.

 6. ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ, ಪಾರದರ್ಶಕವಾಗಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆ, ಬಿತ್ತನೆ/ನಾಟಿ ಮಾಡುವ ಉಪಕರಣಗಳು, ಕೊಯ್ಲು ಮತ್ತು ಸಂರಕ್ಷಣೆಗೆ ಉಪಯುಕ್ತವಾಗಿರುವ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವುದು.

 7. ಕೃಷಿ ಯಾಂತ್ರೀಕರಣ ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳಡಿ ರೈತರ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಸ್ವೀಕರಿಸಲು e-portal ವ್ಯವಸ್ಥೆ ಮಾಡುವುದು.

ಇಲಾಖೆಯ ಕಾರ್ಯನೀತಿ ಮತ್ತು ಕಾರ್ಯನಿರ್ವಹಣೆಯ ವಿವರಣೆ:

 

 1. ಬೇಡಿಕೆ ಅನುಗುಣವಾಗಿ ಬೀಜ, ರಸಗೊಬ್ಬರ, ಪೀಡೆನಾಶಕ, ಕೃಷಿ ಸಾಲ, ಕೃಷಿ ಯಂತ್ರೋಪಕರಣಗಳು ಹಾಗೂ ವಿಸ್ತರಣಾ ಸೇವೆಗಳನ್ನು ಸಮಯೋಚಿತವಾಗಿ ಒದಗಿಸುವುದು.

 2. ಮಳೆ ಆಶ್ರಿತ ಕೃಷಿ ಕೇಂದ್ರೀಕರಿಸಿ ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆದ್ಯತೆ ನೀಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸುವುದು ಮತ್ತು ನೀರಿನ ಸಂರಕ್ಷಣೆ ಸೂಕ್ಷ್ಮ ನೀರಾವರಿಯನ್ನು ಉತ್ತೇಜಿಸುವುದು.

 3. ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ, ಪಾರದರ್ಶಕವಾಗಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆ, ಬಿತ್ತನೆ/ನಾಟಿ ಮಾಡುವ ಉಪಕರಣಗಳು, ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗಿರುವ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವುದು.

 4. ಸಾವಯವ ಕೃಷಿಗೆ ಉತ್ತೇಜನ ನೀಡುವುದು ಹಾಗೂ ಉತ್ಪನ್ನಗಳ ಮಾರಾಟಕ್ಕೆ ವಿವಿಧ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು.

 5. ಕೃಷಿ ಪರಿಕರಗಳ ಮಾರಾಟ ಮತ್ತು ಗುಣಮಟ್ಟ ಕಾಪಾಡುವ ಸಲುವಾಗಿ ವಿವಿಧ ಕಾಯ್ದೆಗಳನ್ನು ಜಾರಿಗೊಳಿಸುವುದು.

 6. ರಾಷ್ರ್ಟೀಯ ಕೃಷಿ ವಿಮಾ ಯೋಜನೆಯಡಿ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸುವುದು.

 7. ಪ್ರಮುಖ ಕೃಷಿ ಬೆಳೆಗಳಲ್ಲಿ ರೈತರಿಗೆ ಲಾಭದಾಯಕವಾಗುವಂತಹ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ಸಹಾಯ ಮಾಡುವುದು.

 8. ಉತ್ತಮ ತಂತ್ರಜ್ಞಾನ ಪ್ರಚಾರದ ಮೂಲಕ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳ ಅಳವಡಿಕೆಯನ್ನು ಪ್ರೋತ್ಸಾಹಿಸುವುದು.

 9. ಗುಣಮಟ್ಟದ ಬೀಜೋತ್ಪಾದನೆ ಹಾಗೂ ವಿತರಣೆಗಾಗಿ ಕಾರ್ಯ ಚಟುವಟಿಕೆಯನ್ನು ರೂಪಿಸುವುದು.

 10. ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಹಾಗೂ ಕೃಷಿ ಕಾರ್ಮಿಕರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸುವುದು.

 11. ಕೃಷಿ ವಾರ್ತಾ ಸೇವೆಗಳು, ಸಿಬ್ಬಂದಿ ಮತ್ತು ರೈತರ ತರಬೇತಿಗಳು, ವಿವಿಧ ಬೆಳೆ ಪ್ರಾತ್ಯಕ್ಷಿಕೆಗಳು ಹಾಗೂ ರೈತರ ಅಧ್ಯಯನ ಪ್ರವಾಸಗಳ ಮೂಲಕ ಪ್ರಯೋಗಾಲಯದಿಂದ ರೈತರ ಭೂಮಿಗೆ ತಂತ್ರಜ್ಞಾನ ವರ್ಗಾವಣೆ.

ಇತ್ತೀಚಿನ ನವೀಕರಣ​ : 07-08-2019 05:14 PM ಅನುಮೋದಕರು: Admin